ಡಾ ಬಿ ಆರ್ ಅಂಬೇಡ್ಕರ್ ವಿವಾದ |ಬಿಜೆಪಿಯ ಗೋ.ಮಧುಸೂದನ್ ಹೇಳೋದೇನು | Oneindia

2017-11-22 4

Interview of Go Madhusudan : A case was filed against Go. Madhusudhan, former MLC for insulted the constitution during a panel discussion in news channel.

ಗೋ.ಮಧುಸೂದನ್ ಸಂದರ್ಶನ : ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ. 'ಅಂಬೇಡ್ಕರ್‌ ಬರೆದಿರುವ ಸಂವಿಧಾನ ನಾವು ಒಪ್ಪುವುದಿಲ್ಲ, ಅದೊಂದು ಸುಳ್ಳಿನ ಕಂತೆ' ಎಂಬ ಬಿಜೆಪಿ ಮುಖಂಡ ಗೋ.ಮಧುಸೂದನ್ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಗೋ.ಮಧುಸೂದನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಒತ್ತಾಯಿಸುತ್ತಿದ್ದಾರೆ. ಗೋ. ಮಧುಸೂದನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬುಧವಾರ (ನ.22) ರಂದು ದಲಿತ ಮತ್ತು ವಿವಿಧ ಸಂಘಟನೆಗಳು ಮೈಸೂರು ಬಂದ್‌ಗೆ ಕರೆ ನೀಡಿವೆ. ತಮ್ಮ ಹೇಳಿಕೆ ಕುರಿತು ಗೋ.ಮಧುಸೂದನ್ ಅವರು ಒನ್ ಇಂಡಿಯಾ ಕನ್ನಡಕ್ಕೆ ಸಂದರ್ಶನ ನೀಡಿದ್ದು, ತಮ್ಮ ಹೇಳಿಕೆ ಸ್ಪಷ್ಟನೆ ನೀಡಿದ್ದಾರೆ. 'ನನ್ನ ಹೇಳಿಕೆ ಬಗ್ಗೆ ಗೊಂದಲ ಸೃಷ್ಟಿಸಿ ಬಿಜೆಪಿಯನ್ನು ದಲಿತ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ಕಾಂಗ್ರೆಸ್ ನಾಯಕರು ಗೂಬೆ ಕೂರಿಸಲು ಪ್ರಯತ್ನ ನಡೆಸುತ್ತಿದ್ದಾರೆ' ಎಂದು ಗೋ.ಮಧುಸೂದನ್ ಆರೋಪಿಸಿದರು.

Videos similaires